Power of Attitude - Kannada Motivation Podcast Por  arte de portada

Power of Attitude - Kannada Motivation

Power of Attitude - Kannada Motivation

Escúchala gratis

Ver detalles del espectáculo
Power of Attitude - Kannada Motivation🎙️ Listen now and change the way you think — because Right Attitude = Right Life!#KannadaMotivation #PowerOfAttitude #PositiveThinking #Inspiration #KannadaPodcast #Mindset #PanchajanyaIASಎರಡು ಮುದ್ದಾದ ಮಕ್ಕಳು ಆಟ ಆಡ್ತಿವೆ. ನೀವು ಪಕ್ಕದಲ್ಲೇ ನಡಕೊಂಡ್ ಹೋಗ್ತಿದೀರಿ. ಪುಟಾಣಿ ಮಕ್ಕಳ ಆಟವನ್ನು ಕ್ಷಣ ಹೊತ್ತು ನೋಡುತ್ತೀರಿ. ಆಗ, ಅವರ ಚೆಂಡೊಂದು ನಿಮ್ಮ ಕಡೆ ಬಂದು ಬೀಳುತ್ತದೆ. ಅವರಲ್ಲಿ ಓಡುತ್ತ ಬಂದ ಮಗುವೊಂದನ್ನ, "ನಿನ್ ಹೆಸರೇನು ಮರಿ" ಅಂತಾ, ಕೇಳ್ತೀರಿ, "ನಿನಗ್ಯಾಕ್ ಬೇಕೊ" ಎಂದ್ಹೇಳಿ ಚಂಡನ್ನ ತೆಗೆದುಕೊಂಡು ಓಡುತ್ತದೆ. ಮರುಕ್ಷಣ ಚೆಂಡು ತೆಗೆದುಕೊಂಡು ಹೋಗಲು ಬಂದ ಇನ್ನೊಂದು ಮಗು ನೀವು ಕೇಳಿದ ಅದೇ ಪ್ರಶ್ನೆಗೆ, "ನನ್ ಹೆಸರು....." ಅಂತ ಮುದ್ದಾಗಿ, ನಗು ನಗುತ್ತಾ ಹೇಳಿ ಹೋಗುತ್ತದೆ! ಇವರಿಬ್ಬರು ಮುಂದೆ ದೊಡ್ಡವರಾದರು ಅಂದುಕೊಳ್ಳಿ, ನಿಮ್ಮದೇ ಕಂಪೆನಿಯ ಒಂದು Interview ಗೆ ಬಂದ್ರು ಅಂದುಕೊಳ್ಳಿ. ಈಗಲೂ ಅವರ ನಡಾವಳಿಗಳು ಹಾಗೆಯೇ ಇವೆ ಅಂದುಕೊಳ್ಳಿ. (ನೀವು ಸದ್ಯಕ್ಕೆ ಏನೇ ಇದ್ರು, ಪರವಾಗಿಲ್ಲ, ಜಸ್ಟ್ ಇಮ್ಯಾಜಿನ್ ಮಾಡಿಕೊಳ್ಳಿ) ಆಗ Interview Panel ನಲ್ಲಿ ನೀವು ಕುಳಿತಿದೀರಿ ಅಂದುಕೊಳ್ಳಿ, ಉದ್ಯೋಗದ ಆಯ್ಕೆಯಲ್ಲಿ ಮೊದಲಿಗೆ ಯಾರನ್ನು ಆಯ್ದುಕೊಳ್ಳುತ್ತೀರಿ! "ನಿನಗ್ಯಾಕ್ ಬೇಕೊ" ಎಂದವನನ್ನೋ? ಅಥವಾಮುದ್ದಾಗಿ, ಹಸನ್ಮುಖಿಯಾಗಿ, ಹೆಸರು ಹೇಳಿ ಹೋಗಿದ್ದವನನ್ನೋ? Security ಗಾರ್ಡ್ ಅಥವಾ body guard ಹುದ್ದೆಗಾದರೆ, "ನಿನಗ್ಯಾಕ್ ಬೇಕೋ ಎಂದವನೇ ಸೂಕ್ತ" ಆದರೇ, ಘನವಾದ ಹುದ್ದೆಗೆ, CEO ನಂತಹ ನಿರ್ವಹಣಾತ್ಮಕ ಹುದ್ದೆಗಳಿಗೆ ಎರಡನೆಯವನೇ ಸೂಕ್ತ! ಇದು ಪವರ್ ಆಫ್ Attitude! 🔥 ಇತ್ತೀಚೆಗೆ ಒಂದು ಪಾಡಕಾಸ್ಟ್ ನಲ್ಲಿ, Zerodha ಕಂಪನಿಯ ಮುಖ್ಯಸ್ಥರಾದ, ನಿಖಿಲ್ ಕಾಮತ್ ರವರು Mahindra ಕಂಪನಿಯ ಮುಖ್ಯಸ್ಥರನ್ನು ಉದ್ದೇಶಿಸಿ, "ಸರ್ ನಿಮ್ಮ ವೃತ್ತಿ ಜೀವನದಲ್ಲಿ, ನೀವು ವಿಪರೀತವಾಗಿ ಕೊಪಗೊಂಡು ರೇಗಾಡಿದ್ದು ಕೇವಲ 3 ಸಾರಿಯಂತೆ, ಹೌದಾ?" ಎಂದು ಕೇಳಿದ್ದಕ್ಕೆ, "No, 18 ಬಾರಿ ಕೊಪಗೊಂಡಿದ್ದಿದೆ" ಎಂದು ಶಾಂತವಾಗಿಯೇ ಉತ್ತರಿಸಿದರು! 18 ಬಹಳ ಆಯ್ತು ಅನ್ಕೋಬೇಡಿ. 1981 ರಿಂದ ಉದ್ಯೋಗದಲ್ಲಿರುವ ಇವರು, ಇಂದಿನ 2025 ರವರೆಗೆ ಅಂದ್ರೆ, 44 ವರ್ಷಗಳಲ್ಲಿ ತಾಳ್ಮೆ ಕಳೆದುಕೊಂಡದ್ದು, ಕೇವಲ 18 ಬಾರಿ ಮಾತ್ರ! ಇದು ದೊಡ್ಡ ವ್ಯಕ್ತಿಗಳಾದವರ "Secret". ಇದರರ್ಥ, ಯಾರ್ ಏನೇ ಅಂದರೂ "ತೆಪ್ಪಗಿರಬೇಕು" ಅಂತಲ್ಲ! ಕಬ್ಬಿಣ ಕಾದಾಗ ಮಾತ್ರ ಕುಟ್ಟಬೇಕು! ಇತ್ತೀಚಿಗಿನ, ಅಮಿತಾಬ್ ಬಚ್ಚನ್ರವರ KBC ಯಲ್ಲಿ ಬಂದಿದ್ದ, ಮಗು ಮತ್ತು ಆ ಮಗುವಿನ ಅತಿರೇಕದ ವರ್ತನೆ ಕುರಿತು ಅನೇಕ ವಿಮರ್ಶೆಗಳು ನಡೆದವು. ಕಾರಣ ಆ ಮಗುವಿನ ವೈಖರಿ! That is Attitude. Attitude ಕೆಲವೊಮ್ಮೆ ದೃಷ್ಟಿಕೋನವೂ ಹೌದು, ಕೆಲವೊಮ್ಮೆ ವೈಖರಿ-ವರ್ತನೆಯೂ ಹೌದು. ಇಲ್ಲಿನ ಚರ್ಚೆ ವೈಖರಿಯದ್ದು!ನೀವು, ತುಂಬಾ ತುಂಬಾ ದೊಡ್ಡ ವ್ಯಕ್ತಿಗಳಾಗುವವರಿದ್ದರೆ, You have to control Your Attitude! ಕೊಪದಲ್ಲಿ ಆಡುವ ಮಾತು, ಮೈಮರೆತು ಮಾಡುವ ಕಾರ್ಯ ದೊಡ್ಡ ಅನಾಹುತಕ್ಕೆ ದಾರಿ ...
Todavía no hay opiniones